Chief Editor
Manohar. R (Manu)
Photo Journalist
chitrataramanu@gmail.com
+91 9845549026
ಚಂದನವನಕ್ಕೆ ಹೊಸ ಖಳನಟ
Posted date: 14 Mon, Jan 2013 ? 03:27:28 PM

೭೦-೮೦ರ ದಶಕದಲ್ಲಿ ವಜ್ರಮುನಿ, ತೂಗದೀಪಶ್ರೀನಿವಾಸ್, ಪ್ರಭಾಕರ್, ಸುದೀರ್  ಖಳನಟರಾಗಿ ಗುರುತಿಸಿಕೊಂಡು ಪ್ರೇಕ್ಷಕರ ಮನದಲ್ಲಿ ತಳಹೂರಿದ್ದರು. ಅವರ ನಂತರದ ಸ್ಥಾನ ಶೋಭರಾಜ್, ಧರ್ಮ, ದೂಡ್ಡಣ್ಣ ಬಂದರೂ ಮುಂದೆ ಅವರುಗಳು ವಿಲನ್ ಹೂರತುಪಡಿಸಿ ಬೇರೆ ತರಹದ ಪಾತ್ರಗಳನ್ನು ಮಾಡುತ್ತಾ ಹೋದರು. ಇದರಿಂದ ಸ್ಯಾಂಡಲ್‌ವುಡ್‌ಗೆ ಖಳನಟನ ಅವಶ್ಯಕತೆ ಅನಿವಾರ್ಯವಾಯಿತು. ಈಗ ಪಟ್ರೋಲ್‌ಪ್ರಸನ್ನ  ಮಂಚೂಣಿಯಲ್ಲಿರುವ ಖಳನಟ. ಇವರೆಲ್ಲರ ಮಧ್ಯೆ ಸೈಲಾಂಟಾಗಿ ೬.೦೧ ಅಡಿ ಎತ್ತರವಿರುವ ಅಜಾನುಬಾಹು  ಸ್ಪುರದ್ರೂಪಿ ಉದಯ್ ಎಂಬ ನಟ ಖಳನಾಯಕನಾಗಿ ಪಾತ್ರಗಳನ್ನು ಮಾಡುತ್ತಾ ಚಂದನವನಕ್ಕೆ  ನವನಟ ಅಂತ ಗುರುತಿಸಿಕೊಂಡಿದ್ದಾರೆ. ಇವರ ಧ್ವನಿ ಮೃದುವಾಗಿದ್ದರೂ ನೋಟ ಎಲ್ಲರನ್ನು ಎದುರಿಸುವ ರೀತಿ ಇದೆ. ಉದಯ್ ಏಕಾಏಕಿ ಖಳನಾಯಕರಾಗಿ ಪ್ರವೇಶ ಪಡೆಯದೆ, ಸುಮಾರು ೧೨೦ ಚಿತ್ರ್ರಗಳಿಗೆ ನಿರಂತರ ೧೨ ವರ್ಷಗಳ ಕಾಲ ಫೈಟರ್ ಆಗಿ ಕೆಲಸ ನಿರ್ವಸಿಹಿಸಿದ್ದಾರೆ.  ಹುಟ್ಟಿದ ಊರು ಬೆಂಗಳೂರು.  ಫೈಟರ್ ಆಗುವ ಮುಂಚೆ ೩ ವರ್ಷಗಳ ಕಾಲ ಕೂಳುಗೋಸ್ಕರ ಆಟೋ ಓಡಿಸಿದ್ದಾರೆ. ಆದರೂ ಇವರ ಮನಸ್ಸು ಫೈಟರ್ ಆಗಬೇಕೆಂಬ ಮಹದಾಸೆಯಿಂದ ಬಸವನಗುಡಿಯಲ್ಲಿರುವ ಕೃಷ್ಣರಾವ್‌ಪಾರ್ಕ್‌ನಲ್ಲಿ  ಫೈಟಿಂಗ್ ಕಲಿಯುತ್ತಿದ್ದಾಗ  ಜೊತೆಯಲ್ಲಿ ದುನಿಯಾವಿಜಯ್ ಸಹ ಇದ್ದರಂತೆ. ವಿಜಯ್ ಫೈಟಿಂಗ್ ಜೊತೆಗೆ ನಟನೆಯನ್ನು ಮಾಡುತ್ತಿದ್ದರಿಂದ ಉದಯ್‌ಗೆ ಅಭಿನಯ ಮಾಡಬೇಕೆಂಬ ತುಡಿತ ಬಂದಿದೆ. ಆದರೆ ಅವಕಾಶ ಸಿಗಲಿಲ್ಲ. ಕೊನೆಗೆ ಹೀರೋಗಳಿಗೆ ಡ್ಯೂಪ್ ಮಾಡಬೇಕಾದ ಪರಿಸ್ಥತಿ ಬಂದಿದೆ. ಪುನೀತ್, ದರ್ಶನ್, ಸುದೀಪ್ ರವರಿಗೆ ಡ್ಯೂಪ್ ಮಾಡಿದ್ದು, ವಿಜಯ್ ಶಿಪಾರಸ್ಸಿನಿಂದ ಚೂಚ್ಚಲಬಾರಿಗೆ ದುನಿಯಾ ಚಿತ್ರದ ಸಣ್ಣ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ. ಇವರ ಬಣ್ಣದ ಬದುಕಿನ ಯಾನ ಸುಮಾರು ೧೫ ಚಿತ್ರಗಳಲ್ಲಿ ನಟಿಸಿದ ಅನುಭವ ಇದೆ,ಜೊತೆಗೆ ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ  ಕಾಣಿಸಿಕೊಂಡಿದ್ದಾರೆ.
      ನೂರಾರು ಚಿತ್ರಗಳಲ್ಲಿ ಡ್ಯೂಪ್ ಮಾಡಿದರೂ  ನೆನಪಿಗೆ ಬರುವಂತಹ ಕಹಿ ಘಟನೆ ನಡೆದಿಲ್ಲ ಅಂತಾರೆ. ಮತ್ತೆ ಜ್ಘಾಪಿಸಿಕೊಂಡು ಯೋಧ, ಕಂಠೀರವ ಚಿತ್ರದಲ್ಲಿ ಕೆಲಸ ಮಾಡುವಾಗ ಸಣ್ಣ ಅಪಘಾತವಾಗಿದೆ ಎಂದು ನಗುತ್ತಾರೆ. ವಿಜಯ್ ಚಿತ್ರಗಳಲ್ಲಿ ಅವರಿಗೆ ಅಂತಲೆ ಒಂದು ಪಾತ್ರ ಸೃಷ್ಟಿಮಾಡಿರುತ್ತಾರೆ. ಅವರದೆ ನಿರ್ಮಾಣದ ಜಯಮ್ಮನ ಮಗದಲ್ಲಿ ಮುಖ್ಯ ಖಳನಾಯಕನಾಗಿ  ಕಾಣಿಸಿಕೊಂಡಿದ್ದಾರೆ. ಅವರು  ನಟಿಸುತ್ತಿರುವ ಮಲ್ಟಿಸ್ಟಾರ್ ಚಿತ್ರದಲ್ಲಿ ಖಳನಾಗಿ ಕಾಣಿಸಿಕೊಂಡು ತಮಿಳು ಮತ್ತು ಮಲೆಯಾಳಂಗೆ ವಿಕಾಸದಿಂದ ಎಂಟ್ರಿಕೊಡುತ್ತಿದ್ದಾರೆ. ಪ್ರಸಕ್ತ ಫೈಟಿಂಗ್‌ಗೆ ವಿದಾಯ ಹೇಳಿ ಪೂರ್ಣ ಪ್ರಮಾಣದಲ್ಲಿ ನಟನೆಗೆ ತೊಡಗಿಸಿಕೊಂಡಿರುವ ಉದಯ್‌ಗೆ ದೊಡ್ಡ ಬ್ಯಾನರ್ ನಿಂದ ಫೈಟಿಂಗ್ ಅವಕಾಶ ಬಂದಲ್ಲಿ ಮಾಡುವಿರಾ ಅಂತ ಪ್ರಶ್ನೆ ಮಾಡಿದರೆ ನಾನು ನಟನಾಗಲು ಆಸೆಪಟ್ಟು ಫೈಟಿಂಗ್ ಕೆಲಸವನ್ನು ಅನಿವಾರ್ಯವಾಗಿ ನಿರ್ವಹಿಸಿದೆ. ಈಗ ಅವಕಾಶಗಳು ಬರುತ್ತಿರುವುದರಿಂದ ಫೈಟಿಂಗ್ ಮಾಡಲಾರೆ ಎಂದು ಕಡ್ಡಿತುಂಡು ಮಾಡಿದಂತೆ ಮಾತನಾಡುತ್ತಾರೆ. ಇವತ್ತು ನಾನು ನಟನಾಗಿ ಕಾಣಿಸಿಕೊಳ್ಳಲು ವಿಜಯ್ ಪ್ರೋತ್ಸಾಹ ಎಂದು ಮರೆಯಲಾಗುವುದಿಲ್ಲ. ಒಂದು ರೀತಿಯಲ್ಲಿ ಅವರು ನನಗೆ ಗಾಡ್‌ಫಾದರ್ ಎಂದು ಕೈಮುಗಿಯುತ್ತಾರೆ ಉದಯ್. ಚಂದನವನಕ್ಕೆ ಖಳನಟ ಸಿಗುತ್ತಿಲ್ಲ ಎಂಬ ಅಪವಾದಕ್ಕೆ ಇವರು ತೆರೆ ಏಳೆಯುತ್ತಾರೆ. ಅವಿವಾಹಿತ ಉದಯ್‌ಗೆ ಚಿತ್ರರಂಗದಲ್ಲಿ  ಉಜ್ವಲ ಭವಿಷ್ಯ ಸಿಗಲೆಂದು ಚಿತ್ರತಾರ ಡಾಟ್ ಕಾಂ ಹಾರೈಸುತ್ತದೆ.
                                                                                                                                                                                                                                                                                                                                                                                                                                                                                ಆರ್‌ಸಿಎಸ್


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಚಂದನವನಕ್ಕೆ ಹೊಸ ಖಳನಟ - Chitratara.com
Copyright 2009 chitratara.com Reproduction is forbidden unless authorized. All rights reserved.